ಕಿಲ್ಲಿಂಗ್ ವೀರಪ್ಪನ್ ರಾಮ್ ಗೋಪಾಲ ವರ್ಮ ಬರೆದು ನಿರ್ದೇಶಿಸಿದ ೨೦೧೬ ರ ಭಾರತದ ಕನ್ನಡ ಭಾಷೆಯ ಸಾಕ್ಷ್ಯಚಿತ್ರರೂಪಕದ ಚಲನಚಿತ್ರವಾಗಿದೆ. ಈ ಚಿತ್ರವು ಕಾಡುಗಳ್ಳ ವೀರಪ್ಪನ್ ನನ್ನು ಹಿಡಿಯಲು ಅಥವ ಕೊಲ್ಲಲು ನಡೆಸಿದ ಆಪರೇಷನ್ ಕೊಕೂನ್ನ ಸಮಯದಲ್ಲಿ ನಡೆದ ಘಟನೆಗಳ ಆಧಾರಿತವಾಗಿದೆ. ಪ್ರಧಾನ ಪಾತ್ರವೊಂದರಲ್ಲಿ ಶಿವರಾಜ್‍ಕುಮಾರ್ (ನಟ) ನಟಿಸಿದ್ದಾರೆ, ಈ ಪಾತ್ರವು ಆಗಿನ ಪೊಲೀಸ್ ಅಧೀಕ್ಷಕ ಆಪರೇಷನ್ ಕೊಕೂನ್ನ ರೂವಾರಿ ಎನ ಕೆ ಸೆಂತಮಾರೈ ಕಣ್ಣನ್ರಿಂದ ಪ್ರೆರಿತವಾಗಿದೆ. ಜನವರಿ ೧, ೨೦೧೬ ರಂದು ಈ ಚಿತ್ರದ ಕನ್ನಡ ಆವೃತ್ತಿಯು ೨೦೦ರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಾಂತ ಬಿಡುಗಡೆಯಾಯಿತು.ಚಿತ್ರದ ಬಿಡುಗಡೆಯ ನಂತರ ವಿಮರ್ಶಕರು ಚಿತ್ರದ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಚಿತ್ರಕಥೆ, ನಟನೆಯನ್ನು ಶ್ಲಾಘಿಸಿದರು.ತೆಲುಗು ಆವೃತ್ತಿ ೭ ಜನವರಿ ೨೦೧೬ ರಂದು ಬಿಡುಗಡೆಯಾಯಿತು == ==